
SBI CBO 2026 Kannada: ಏನು ಕೆಲಸ? ಸಂಬಳ ಎಷ್ಟು? ಯಾರಿಗೆ ಈ ಉದ್ಯೋಗ ಸೂಕ್ತ?
ಇತ್ತೀಚೆಗೆ SBI Circle Based Officer (CBO) ನೇಮಕಾತಿ ಬಗ್ಗೆ ಬಹಳ ಜನ ಕೇಳ್ತಿದ್ದಾರೆ.
“ಈ CBO ಅಂದ್ರೆ ಏನು?”,
“ಇದು PO ತರಹನಾ?”,
“ಸಂಬಳ ಚೆನ್ನಾಗಿದೆಯಾ?”,
“ನನಗೆ ಇದು ಸೂಕ್ತವೇ?”
ಅಂತಾ ಗೊಂದಲ ಸಾಮಾನ್ಯ.
ನೀವೂ ಹಾಗೇ ಯೋಚಿಸ್ತಿದ್ದರೆ, ಈ ಲೇಖನವನ್ನು ನಿಧಾನವಾಗಿ ಓದಿ.
ಕೊನೆಗೆ ನಿಮಗೆ ಅರ್ಜಿ ಹಾಕಬೇಕಾ ಬೇಡವಾ ಅನ್ನೋ ಸ್ಪಷ್ಟತೆ ಬರಬೇಕು ಅನ್ನೋದೇ ಉದ್ದೇಶ.
1️⃣ SBI Circle Based Officer (CBO) ಎಂದರೇನು?
ಸರಳವಾಗಿ ಹೇಳಿದರೆ,
CBO ಅಂದ್ರೆ SBI ಯಲ್ಲಿ ನೇರವಾಗಿ Officer ಹುದ್ದೆ.
ಇದು Clerk ಕೆಲಸ ಅಲ್ಲ.
PO ತರಹ ಹೊಸಬರಿಗೆಲ್ಲವೂ ಅಲ್ಲ.
ಇಲ್ಲಿ SBI ಏನು ಮಾಡ್ತಿದೆ ಅಂದ್ರೆ –
👉 ಈಗಾಗಲೇ ಬ್ಯಾಂಕ್ ಅಥವಾ ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ
👉 “ನೀವು ನಮ್ಮ ಬ್ಯಾಂಕ್ಗೆ ಬನ್ನಿ, ನೇರವಾಗಿ Officer ಆಗಿ ಕೆಲಸ ಮಾಡಿ” ಅಂತ ಕರೆಯ್ತಿದೆ.
ಇಲ್ಲಿ ಮುಖ್ಯ ವ್ಯತ್ಯಾಸ ಏನು ಅಂದ್ರೆ –
ನೀವು ಯಾವ ಸರ್ಕಲ್ ಆಯ್ಕೆ ಮಾಡ್ತೀರೋ, ಅದೇ ಸರ್ಕಲ್ನಲ್ಲಿ ಕೆಲಸ.
ಬೇರೆ ರಾಜ್ಯಕ್ಕೆ ವರ್ಗಾವಣೆ ಅನ್ನೋ ಭಯ ಇಲ್ಲ (ಕನಿಷ್ಠ ಹಲವು ವರ್ಷ).
2️⃣ SBI CBO ನೇಮಕಾತಿ 2026: ಎಷ್ಟು ಹುದ್ದೆಗಳಿವೆ?
ಈ ಬಾರಿ SBI ಸಾಕಷ್ಟು ಹುದ್ದೆಗಳನ್ನು ಘೋಷಿಸಿದೆ.
ಒಟ್ಟು ಹುದ್ದೆಗಳು ಸಾವಿರದ ಹತ್ತಿರ(1000+) ಇದೆ.
ಇದನ್ನು ಸರ್ಕಲ್ವಾರು ಹಂಚಿದ್ದಾರೆ.
ಉದಾಹರಣೆಗೆ:
- ಬೆಂಗಳೂರು ಸರ್ಕಲ್ (ಕರ್ನಾಟಕ) – ಹೆಚ್ಚಿನ ಹುದ್ದೆಗಳು
- ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು – ಅಲ್ಲಿ ಕೂಡ ಒಳ್ಳೆಯ ಸಂಖ್ಯೆಯಿದೆ
ಇಲ್ಲಿ ಒಂದು ಮುಖ್ಯ ವಿಷಯ ಗಮನಿಸಬೇಕು:
👉 ನೀವು ಒಂದು ಸರ್ಕಲ್ ಮಾತ್ರ ಆಯ್ಕೆ ಮಾಡಬಹುದು
👉 ಒಂದೇ ವೇಳೆ ಎರಡು ಸರ್ಕಲ್ಗೆ ಅರ್ಜಿ ಹಾಕಲು ಆಗಲ್ಲ
ಅದರರ್ಥ –
ನೀವು ನಿಮ್ಮ ಸ್ಪರ್ಧೆಯನ್ನು ನಿಮ್ಮ ರಾಜ್ಯದ ಅಭ್ಯರ್ಥಿಗಳ ಜೊತೆ ಮಾಡ್ತಿರೋದು.
ಇದು ದೊಡ್ಡ ಪ್ಲಸ್ ಪಾಯಿಂಟ್.
3️⃣ SBI Circle Based Officer ಸಂಬಳ ವಿವರ
ಈಗ ಎಲ್ಲರಿಗೂ ಮುಖ್ಯ ಪ್ರಶ್ನೆ –
“ಸಂಬಳ ಎಷ್ಟು ಬರುತ್ತೆ?”
👉 ಮೂಲ ಸಂಬಳ
CBO ಆಗಿ ಸೇರೋಕೆ ನಿಮ್ಮ ಮೂಲ ವೇತನ ಸುಮಾರು ₹48,000.
ಇದು ಕೇಳಿದ್ರೆ “ಓಹ್” ಅನ್ನಿಸಬಹುದು.
ಆದರೆ ಇಲ್ಲಿ ಕಥೆ ಮುಗಿಯಲ್ಲ.
👉 ಬೇರೆ ಭತ್ಯೆಗಳು
ಇದಕ್ಕೆ ಸೇರಿ:
- DA (ದರ ಏರಿಕೆ ಭತ್ಯೆ)
- HRA ಅಥವಾ ಮನೆ ಲೀಸ್
- ವೈದ್ಯಕೀಯ ಸೌಲಭ್ಯ
- NPS (ಪಿಂಚಣಿ)
- SBI ಸಿಬ್ಬಂದಿಗೆ ಇರುವ ಬೇರೆ ಸೌಲಭ್ಯಗಳು
ಎಲ್ಲಾ ಸೇರಿಸಿ ನೋಡಿದರೆ,
ಕೈಗೆ ಸಿಗೋ ಸಂಬಳ ₹70,000 – ₹75,000 ಹತ್ತಿರ ಬರುತ್ತೆ (ನಗರದ ಮೇಲೆ ಅವಲಂಬಿತ).
ಮನೆಯವರಿಗೆ ಹೇಳೋಕೆ ಇದು ಒಳ್ಳೆಯ ಸಂಖ್ಯೆ.
4️⃣ SBI CBO ಪರೀಕ್ಷಾ ಮಾದರಿ – ಹೇಗಿರುತ್ತೆ?
ಇಲ್ಲಿ ಪರೀಕ್ಷೆ ತುಂಬಾ ಕಷ್ಟ ಅಂತ ಹೇಳಲ್ಲ.
ಆದ್ರೆ ನಿರ್ಲಕ್ಷ್ಯ ಮಾಡೋ ಮಟ್ಟಿಗೂ ಸುಲಭವಲ್ಲ.
👉 ಮೊದಲ ಹಂತ: ಆನ್ಲೈನ್ ಪರೀಕ್ಷೆ
ಇದು ಎರಡು ಭಾಗ:
Objective Test
- ಇಂಗ್ಲಿಷ್
- ಬ್ಯಾಂಕಿಂಗ್ ಜ್ಞಾನ
- ಸಾಮಾನ್ಯ ಜ್ಞಾನ / ಅರ್ಥಶಾಸ್ತ್ರ
- ಕಂಪ್ಯೂಟರ್
ಒಟ್ಟು 120 ಅಂಕ.
ಇಲ್ಲಿ ಒಂದು ಒಳ್ಳೆಯ ಸುದ್ದಿ –
❌ ನೆಗಟಿವ್ ಮಾರ್ಕಿಂಗ್ ಇಲ್ಲ
❌ ಸೆಕ್ಷನ್ ಕಟ್ಆಫ್ ಇಲ್ಲ
Descriptive Test
- Essay
- Letter Writing
ಒಟ್ಟು 50 ಅಂಕ.
ಇದನ್ನೆಲ್ಲಾ ಸೇರಿಸಿ ನಿಮ್ಮ ಮೆరిట್ ನೋಡ್ತಾರೆ.
👉 ಎರಡನೇ ಹಂತ: Screening
ಇದು ತುಂಬಾ ಮುಖ್ಯ.
ನಿಮ್ಮ ಕೆಲಸದ ಅನುಭವ,
ನಿಮ್ಮ Job Profile,
SBI Officer ಕೆಲಸಕ್ಕೆ ಹೊಂದುತ್ತದಾ ಅನ್ನೋದು ಇಲ್ಲಿ ತೀರ್ಮಾನ ಆಗುತ್ತೆ.
ಇಲ್ಲಿ ಅಸಡ್ಡೆ ತೋರಿದ್ರೆ,
ಪರೀಕ್ಷೆ ಪಾಸ್ ಆದರೂ ಹೊರ ಹೋಗಬೇಕು.
👉 ಸಂದರ್ಶನ
ಸಾಮಾನ್ಯ ಮಾತುಕತೆ.
ನಿಮ್ಮ ಅನುಭವ, ಮನೋಭಾವ, ಸ್ಪಷ್ಟತೆ ನೋಡ್ತಾರೆ.
5️⃣ SBI CBO ಹಿಂದಿನ ವರ್ಷದ ಕಟ್ಆಫ್
ಇಲ್ಲಿ ಜನ ಹೆಚ್ಚು ಭಯ ಪಡೋದು ಕಟ್ಆಫ್ ನೋಡಿ.
ನಿಜ ಹೇಳ್ಬೇಕಂದ್ರೆ –
CBO ಕಟ್ಆಫ್ PO ತರಹ ಅತಿ ಜಾಸ್ತಿ ಇಲ್ಲ.
ಹಿಂದಿನ ವರ್ಷಗಳಲ್ಲಿ:
- General: ಸುಮಾರು 65–75
- OBC / EWS: 60ರ ಹತ್ತಿರ
- SC / ST: 50–55
ಇದು ಸರ್ಕಲ್ನ ಮೇಲೆ ಬದಲಾಗುತ್ತೆ.
ನೀವು ಗುರಿ ಇಡೋದು ಏನು ಅಂದ್ರೆ –
👉 75+ ಸುರಕ್ಷಿತ ಸ್ಕೋರ್.
6️⃣ 2026ಕ್ಕೆ ನಿರೀಕ್ಷಿತ ಕಟ್ಆಫ್
ಈ ವರ್ಷ ಸ್ಪರ್ಧೆ ಸ್ವಲ್ಪ ಜಾಸ್ತಿ ಇರಬಹುದು, ಅಂದರೇ ಹಿಂದಿನವರ್ಷದ cuttoffಕ್ಕಿಂಥ +05 ಎಂದು ಅಂದಾಜಿಸಬಹಾದು
ಆದ್ರೆ ಹುದ್ದೆಗಳೂ ಹೆಚ್ಚು.
ಆದ್ರೆ ಭಯ ಬೇಡ.
ನೀವು:
- ಬ್ಯಾಂಕಿಂಗ್ ಜ್ಞಾನ ಚೆನ್ನಾಗಿ ಓದಿದ್ರೆ
- GA current affairs ನೋಡಿದ್ರೆ
- Descriptive practice ಮಾಡಿದ್ರೆ
ಇದು ಕ್ಲಿಯರ್ ಮಾಡಬಹುದಾದ ಪರೀಕ್ಷೆ.
7️⃣ SBI CBO ಕೆಲಸದ ಸ್ವರೂಪ – ನಿಜವಾಗಿ ಏನು ಕೆಲಸ?
ಇದು ತುಂಬಾ ಜನ ತಪ್ಪಾಗಿ ಅರ್ಥ ಮಾಡ್ಕೊಳ್ತಾರೆ.
CBO ಅಂದ್ರೆ:
- ಶಾಖೆಯ ದಿನನಿತ್ಯದ ಕೆಲಸ ನೋಡಿಕೊಳ್ಳುವುದು
- ಗ್ರಾಹಕರ ಸಮಸ್ಯೆ ಪರಿಹಾರ
- ಲೋನ್ ಫೈಲ್ಗಳ ಪರಿಶೀಲನೆ
- ಟಾರ್ಗೆಟ್ಗಳು ಇರುತ್ತವೆ (ಇದು ಸತ್ಯ)
- ಆಡಿಟ್, ರಿಪೋರ್ಟ್ ಕೆಲಸ
ಒಟ್ಟಾರೆ ಹೇಳಿದ್ರೆ –
ನಿಮ್ಮ ತಲೆಯೂ ಕೆಲಸ ಮಾಡಬೇಕು, ಮಾತೂ ಕೆಲಸ ಮಾಡಬೇಕು.
8️⃣ ದಿನನಿತ್ಯದ ಕೆಲಸ ಹೇಗಿರುತ್ತೆ?
ಬೆಳಗ್ಗೆ ಬ್ಯಾಂಕ್ ಓಪನ್.
ಗ್ರಾಹಕರು.
ಫೋನ್ ಕಾಲ್ಗಳು.
ರಿಪೋರ್ಟ್ಗಳು.
ಕೆಲವೊಮ್ಮೆ ಒತ್ತಡ ಇರುತ್ತೆ.
ಆದ್ರೆ ಇದು ಸರ್ಕಾರಿ ಬ್ಯಾಂಕ್ ಕೆಲಸ.
ಖಾಸಗಿ ಕಂಪನಿಯ ತರಹ “ಇವತ್ತು ಟಾರ್ಗೆಟ್ ಇಲ್ಲ ಅಂದ್ರೆ ಹೊರಗೆ” ಅನ್ನೋದು ಇಲ್ಲ.
9️⃣ SBI CBO ಹುದ್ದೆ ಯಾರಿಗೆ ಸೂಕ್ತ? ಯಾರಿಗೆ ಅಲ್ಲ?
ಸೂಕ್ತ:
- ಈಗಾಗಲೇ ಬ್ಯಾಂಕ್ / NBFC ಕೆಲಸ ಮಾಡ್ತಿರೋರು
- ಸ್ಟೇಬಲ್ ಜೀವನ ಬೇಕು ಅನ್ನೋರಿಗೆ
- ಒಂದು ರಾಜ್ಯದಲ್ಲೇ ಕೆಲಸ ಮಾಡಬೇಕು ಅನ್ನೋರಿಗೆ
ಸೂಕ್ತವಲ್ಲ:
- ಫ್ರೆಶರ್ಗಳಿಗೆ
- ತುಂಬಾ ಲೈಟ್ ಕೆಲಸ ಬೇಕು ಅನ್ನೋರಿಗೆ
- ಸೇಲ್ಸ್ ಕೆಲಸ ಬೇಡ ಅನ್ನೋರಿಗೆ
🔍 ಕರ್ನಾಟಕದ ಬ್ಯಾಂಕ್ ಉದ್ಯೋಗಗಳು: ನಮ್ಮವರಿಗೆ ಅವಕಾಶ ಇದೆ, ಆದರೆ ನಾವು ಹಿಂದೆ ಬೀಳ್ತಿದ್ದೇವಾ?
ಇದು ಸ್ವಲ್ಪ ಕಠಿಣ ವಿಷಯ.
ಆದ್ರೆ ಹೇಳಲೇಬೇಕು.
ಇವತ್ತು ಕರ್ನಾಟಕದ ಬ್ಯಾಂಕ್ಗಳಲ್ಲಿ ಕೆಲಸ ಮಾಡ್ತಿರುವವರಲ್ಲಿ,
ಬಹಳ ಜನ ಬೇರೆ ರಾಜ್ಯದವರು ಅನ್ನೋದು ನಿಜ.
ಅವರು ತಪ್ಪು ಮಾಡ್ತಿದ್ದಾರೆ ಅಂತಲ್ಲ.
ಅವರು ಅವಕಾಶ ನೋಡಿ, ತಯಾರಿ ಮಾಡಿ, ಪರೀಕ್ಷೆ ಬರೆದು ಒಳಗೆ ಹೋಗಿದ್ದಾರೆ.
ಆದ್ರೆ ಪ್ರಶ್ನೆ ಏನು ಅಂದ್ರೆ –
👉 ಈ ಕೆಲಸಗಳು ನಮ್ಮ ರಾಜ್ಯದವರಿಗೆ ಅಲ್ಲವೇ?
👉 ನಾವು ಯಾಕೆ ಹಿಂದೆ ಬೀಳ್ತಿದ್ದೇವೆ?
ಇದರ ಪ್ರಮುಖ ಕಾರಣ ಅವಗಾಹನೆ ಕೊರತೆ.
ಬಹಳ ಮನೆಗಳಲ್ಲಿ:
- “ಈ CBO ಏನು?” ಅಂತ ಗೊತ್ತಿಲ್ಲ
- “ಕರ್ನಾಟಕ ಸರ್ಕಲ್ಗೆ ಕನ್ನಡ ಗೊತ್ತಿದ್ದರೆ ಲಾಭ ಇದೆ” ಅನ್ನೋದು ತಿಳಿದಿಲ್ಲ
- “ನಮ್ಮವರೇ ಬರೆಯಬೇಕು” ಅನ್ನೋ ಆತ್ಮವಿಶ್ವಾಸ ಕಡಿಮೆ
ಅದ್ರಲ್ಲೂ SBI CBO ತರಹದ ಪರೀಕ್ಷೆಗಳಲ್ಲಿ
👉 ಸ್ಥಳೀಯ ಭಾಷೆ (ಕನ್ನಡ) ಗೊತ್ತಿರೋದು ದೊಡ್ಡ ಅಡ್ವಾಂಟೇಜ್
👉 ಸರ್ಕಲ್ ಲಿಮಿಟ್ ಇದೆ
👉 ಹೊರ ರಾಜ್ಯದವರು ಇಲ್ಲಿ ಬರಲು ಕಷ್ಟ ಪಡ್ತಾರೆ
ಆದ್ರೆ ನಾವು ತಯಾರಿ ಮಾಡದೇ ಇದ್ದರೆ ಏನು ಆಗುತ್ತೆ?
ಬೇರೆ ರಾಜ್ಯದವರು ಕನ್ನಡ ಕಲಿತು,
ಇಲ್ಲಿನ ಅವಕಾಶಗಳನ್ನು ಪಡೆದು ಹೋಗ್ತಾರೆ.
ಇದು ಕೋಪಕ್ಕೆ ಕಾರಣ ಅಲ್ಲ.
ಇದು ಎಚ್ಚರಿಕೆ.
ಈ ಪರೀಕ್ಷೆಗಳು ನಮ್ಮವರಿಗೇ ಸೂಕ್ತವಾಗಿರುವಾಗ,
ನಾವು ನಿರ್ಲಕ್ಷ್ಯ ಮಾಡಿದರೆ
ಅವಕಾಶ ಕೈ ತಪ್ಪುವುದು ನಮ್ಮ ತಪ್ಪೇ.
ಆದ್ದರಿಂದ:
- ನೀವು ಬ್ಯಾಂಕಿಂಗ್ ಅನುಭವ ಹೊಂದಿದ್ದರೆ
- ನೀವು ಕನ್ನಡ ಬಲ್ಲವರಾಗಿದ್ದರೆ
- ನೀವು ಕರ್ನಾಟಕದಲ್ಲೇ ಕೆಲಸ ಮಾಡಬೇಕು ಅನ್ನೋ ಆಸೆ ಇದ್ದರೆ
👉 ಈ ಪರೀಕ್ಷೆ ನಿಮ್ಮಿಗಾಗಿ.
ಇನ್ನೊಬ್ಬರು ಬಂದು ನಮ್ಮ ಅವಕಾಶ ತೆಗೆದುಕೊಂಡರು ಅಂತ ಹೇಳೋದಕ್ಕಿಂತ,
👉 ನಾವು ತಯಾರಿ ಮಾಡಿ ತೆಗೆದುಕೊಳ್ಳೋಣ ಅನ್ನೋ ಮನಸ್ಥಿತಿ ಬೇಕು.
ಇದು ಸ್ಪರ್ಧೆ.
ಅದ್ರಲ್ಲಿ ಗೆಲ್ಲೋದು ಜಾಗರೂಕವಾಗಿರುವವರು.
🧾 ಸ್ಥಳೀಯ ಭಾಷೆ ನಿಯಮ ಮತ್ತು ಕರ್ನಾಟಕ ಅಭ್ಯರ್ಥಿಗಳಿಗೆ ಇರುವ ತಾಂತ್ರಿಕ ಲಾಭ
SBI Circle Based Officer ಹುದ್ದೆಗೆ ಒಂದು ಮುಖ್ಯ ನಿಯಮ ಇದೆ.
ಅದು ಸ್ಥಳೀಯ ಭಾಷೆ ಪರೀಕ್ಷೆ.
ಕರ್ನಾಟಕ ಸರ್ಕಲ್ ಆಯ್ಕೆ ಮಾಡಿರುವ ಅಭ್ಯರ್ಥಿಗಳಿಗೆ
ಕನ್ನಡ ಓದಲು, ಬರೆಯಲು, ಅರ್ಥ ಮಾಡಿಕೊಳ್ಳಲು ಬರಬೇಕು.
ಇದಕ್ಕಾಗಿ SBI ಪ್ರತ್ಯೇಕ ಭಾಷಾ ಪರೀಕ್ಷೆ ಮಾಡುತ್ತದೆ.
ಆದ್ರೆ ಇಲ್ಲಿ ಒಂದು ತಾಂತ್ರಿಕ ವಿಷಯ ಇದೆ.
ನೀವು ಈಗಾಗಲೇ 10ನೇ ಅಥವಾ 12ನೇ ತರಗತಿಯಲ್ಲಿ
ಕನ್ನಡ ಒಂದು ವಿಷಯವಾಗಿ ಓದಿದ್ದರೆ,
ಈ ಭಾಷಾ ಪರೀಕ್ಷೆಯಿಂದ ನಿಮಗೆ ವಿನಾಯಿತಿ ಸಿಗುತ್ತದೆ.
ಇದು ಕರ್ನಾಟಕದ ಅಭ್ಯರ್ಥಿಗಳಿಗೆ ಸಹಜವಾಗಿ ಇರುವ ಲಾಭ.
ಬೇರೆ ರಾಜ್ಯದ ಅಭ್ಯರ್ಥಿಗಳಿಗೆ
ಕನ್ನಡ ಕಲಿಯುವುದು, ಬರೆಯುವುದು, ಪರೀಕ್ಷೆ ಪಾಸ್ ಮಾಡುವುದು
ಹೆಚ್ಚು ಸಮಯ ತೆಗೆದುಕೊಳ್ಳುವ ಕೆಲಸ.
ಇದರಿಂದಾಗಿ:
-
ಸ್ಪರ್ಧೆಯ ಮಟ್ಟ ಕಡಿಮೆಯಾಗುತ್ತದೆ
-
ಸ್ಥಳೀಯ ಅಭ್ಯರ್ಥಿಗಳಿಗೆ ಆಯ್ಕೆ ಆಗುವ ಸಾಧ್ಯತೆ ಹೆಚ್ಚುತ್ತದೆ
-
ಪರೀಕ್ಷೆಯ ನಂತರವೂ ಕೆಲಸದಲ್ಲಿ ಹೊಂದಿಕೊಳ್ಳಲು ಸುಲಭವಾಗುತ್ತದೆ
ಇದು ಪ್ರೇರಣೆ ಅಲ್ಲ, ವಾಸ್ತವ.
SBI CBO ನೇಮಕಾತಿಯಲ್ಲಿ
ಸ್ಥಳೀಯ ಭಾಷೆ ನಿಯಮವನ್ನು ಸರಿಯಾಗಿ ಅರ್ಥ ಮಾಡಿಕೊಂಡವರು
ಆಯ್ಕೆ ಪ್ರಕ್ರಿಯೆಯಲ್ಲಿ ಒಂದು ಹಂತ ಮುಂಚಿತದಲ್ಲಿರುತ್ತಾರೆ
🔚 ಕೊನೆ ಮಾತು
CBO ಹುದ್ದೆ ಅಂದ್ರೆ –
“ಚಿನ್ನದ ತಟ್ಟೆಯಲ್ಲಿ ಕೊಟ್ಟ ಕೆಲಸ” ಅಂತ ಅಲ್ಲ.
ಆದ್ರೆ
ಸ್ಥಿರತೆ, ಗೌರವ, ಒಳ್ಳೆಯ ಸಂಬಳ –
ಇವೆಲ್ಲ ಬೇಕು ಅಂದ್ರೆ ಇದು ಒಳ್ಳೆಯ ಆಯ್ಕೆ.
ಅರ್ಜಿ ಹಾಕೋ ಮುನ್ನ,
ನಿಮ್ಮ ಅನುಭವ, ಮನಸ್ಥಿತಿ, ಗುರಿ –
ಎಲ್ಲವನ್ನೂ ಒಮ್ಮೆ ನೆನಸಿ ನೋಡಿ.
ಅದಾದ್ಮೇಲೆ ನಿರ್ಧಾರ ಮಾಡಿ.